vernac-language-icon
Language
banner-image
mobileimage
" MPL ಅಪ್ಲಿಕೇಶನ್ ಅನ್ನು ಇದೀಗ ಡೌನ್‌ಲೋಡ್ ಮಾಡಲು ಕೋಡ್ ಅನ್ನು ಸ್ಕ್ಯಾನ್ ಮಾಡಿ!"
" MPL ಅಪ್ಲಿಕೇಶನ್ ಅನ್ನು ಇದೀಗ ಡೌನ್‌ಲೋಡ್ ಮಾಡಲು ಕೋಡ್ ಅನ್ನು ಸ್ಕ್ಯಾನ್ ಮಾಡಿ!"

ಆನ್‌ಲೈನ್‌ನಲ್ಲಿ ಹಾವು ಮತ್ತು ಏಣಿ ಆಟವನ್ನು ಆಡಿ

ಹಾವು ಮತ್ತು ಏಣಿ ಆಟದ ಬಗ್ಗೆ

ಹಾವು ಮತ್ತು ಏಣಿ ಆಟವು ಎರಡು ಅಥವಾ ಹೆಚ್ಚಿನ ಪ್ಲೇಯರ್‌ಗಳು ಆಡುವ ಫನ್ ಬೋರ್ಡ್ ಗೇಮ್ ಆಗಿದ್ದು, ವರ್ಷಗಳು ಕಳೆದಂತೆ ಈ ಗೇಮ್ ವಿಶ್ವಾದ್ಯಂತ ಜನಪ್ರಿಯವಾಗಿದೆ. ಹಾವು ಮತ್ತು ಏಣಿ ಆಟದ ಬೋರ್ಡ್ ಗ್ರಿಡೆಡ್ ಚೌಕಗಳನ್ನು ಹೊಂದಿದೆ. ಗೇಮ್ ಬೋರ್ಡ್‌ನಲ್ಲಿ ಸಾಕಷ್ಟು ಸಂಖ್ಯೆಯ ಏಣಿಗಳು ಮತ್ತು ಹಾವುಗಳು ಇರುತ್ತವೆ ಮತ್ತು ಪರಸ್ಪರ ಕನೆಕ್ಟ್ ಆಗುತ್ತವೆ. ದಾಳಗಳು ಹೇಗೆ ಉರುಳುತ್ತವೆ ಎಂಬುದರ ಮೇಲೆ ಒಬ್ಬರ ಟೋಕನ್‌ಗಳನ್ನು ಬೋರ್ಡ್‌ನಲ್ಲಿ ಇಡುವುದು ಆಟದ ಉದ್ದೇಶವಾಗಿದೆ. ಪ್ರತಿಯೊಂದು ಟೋಕನ್ ಅನ್ನು ಕೆಳಗಿನ ಚೌಕದಿಂದ (1) ಪ್ರಾರಂಭಿಸಬೇಕು ಮತ್ತು ಕೊನೆಯ ಚೌಕದವರೆಗೆ ತೆಗೆದುಕೊಂಡು ಹೋಗಬೇಕು. ಬೋರ್ಡ್ ಕೊನೆಯ ಸಂಖ್ಯೆಯಾಗಿ (100) ಅನ್ನು ಹೊಂದಿದೆ. ಹೀಗೆ ಸಾಗುವ ದಾರಿಯಲ್ಲಿ, ಪ್ಲೇಯರ್‌ಗಳು ಏಣಿಗಳನ್ನು ತಲುಪುತ್ತಾರೆ. ಅದು ನಿಮಗೆ ಮೇಲಕ್ಕೆ ಚಲಿಸಲು ಸಹಾಯ ಮಾಡುತ್ತದೆ. ಆದರೆ ಅದೇ ಪ್ಲೇಯರ್‌ಗಳು ಹಾವುಗಳ ಚೌಕವನ್ನು ತಲುಪಿದರೆ ಕೆಳಗೆ ಜಾರಿ ಬಿಡುತ್ತಾರೆ.

ಈ ಆಟ ತುಂಬಾ ಸರಳವಾಗಿದೆ. ವಯಸ್ಕರು ಮತ್ತು ಮಕ್ಕಳು ಎಂಬ ಭೇದವಿಲ್ಲದೆ ಆಡುವ ಈ ಆಟ ಅತ್ಯಂತ ಜನಪ್ರಿಯವಾಗಿದೆ. ಹಾವು ಮತ್ತು ಏಣಿ ಬೋರ್ಡ್ ಆಟವನ್ನು ಚ್ಯೂಟ್ಸ್ ಮತ್ತು ಲ್ಯಾಡರ್ಸ್, ಬೈಬಲ್ ಅಪ್ಸ್ ಮತ್ತು ಡೌನ್ಸ್, ಇತ್ಯಾದಿ ಎಂದೂ ಕರೆಯುತ್ತಾರೆ. ಈ ಆಟವು ನೈತಿಕತೆಯನ್ನೂ ಹೊಂದಿದೆ. ಇಲ್ಲಿ ಬೋರ್ಡ್ ಮೇಲೆ ಏರುವ ಪ್ಲೇಯರ್‌ಗಳು, ಸದ್ಗುಣಗಳಿಂದ ತುಂಬಿದ ಜೀವನದ ಪ್ರಗತಿಯನ್ನು ಪ್ರತಿನಿಧಿಸುತ್ತಾರೆ (ಏಣಿಗಳು. ) ಮತ್ತು ಕೆಳಗಿಳಿಯುವುದು ದುರ್ಗುಣಗಳನ್ನು ಪ್ರತಿನಿಧಿಸುತ್ತದೆ (ಹಾವುಗಳು).

ತಮಾಷೆಯ, ಮನರಂಜನೆಯ ರಾತ್ರಿಗಾಗಿ ನಿಮ್ಮ ಸ್ನೇಹಿತರೊಂದಿಗೆ ನೀವು ಈ ಹಾವು ಮತ್ತು ಏಣಿ ಆಟವನ್ನು ಆಡಿ. ಮತ್ತೆ ಇದರಲ್ಲಿ ಹೊಸದೇನು ಅಂದ್ರಾ! MPL ಜೊತೆಗೆ, ನೀವೀಗ ಈ ಬೋರ್ಡ್ ಗೇಮ್ ಅನ್ನು ಆನ್‌ಲೈನ್‌ನಲ್ಲಿ ಸಹ ಆಡಬಹುದು! ನಿಮ್ಮ ಸ್ಕಿಲ್ಸ್‌ಗಳ ಆಧಾರದ ಮೇಲೆ ನೀವು ಎದುರಾಳಿಯೊಂದಿಗೆ ಆಡುತ್ತೀರಿ ಮತ್ತು ಸಮಯದ ಮಿತಿಯೊಳಗೆ, ನೀವು ಗರಿಷ್ಠ ಸ್ಕೋರ್ ಗಳಿಸಬೇಕು. ಆಸಕ್ತಿದಾಯಕವಾಗಿದೆ, ಅಲ್ಲವೇ?

ಉಪಕರಣ

ಈ ಆಟದಲ್ಲಿ, ಬೋರ್ಡ್‌ನ ಗಾತ್ರವು ಬದಲಾಗಬಹುದು. ಆದರೆ ಸಾಮಾನ್ಯವಾಗಿ 8×8, 10×10, ಅಥವಾ 12×12 ಚೌಕಗಳ ಬೋರ್ಡ್ ಇರುತ್ತದೆ. ಬೋರ್ಡ್‌ಗಳು ಏಣಿಗಳನ್ನು ಹೊಂದಿದ್ದು ಅವು ನಿರ್ದಿಷ್ಟ ಚೌಕಗಳಲ್ಲಿ ಪ್ರಾರಂಭವಾಗುತ್ತವೆ ಮತ್ತು ಕೊನೆಗೊಳ್ಳುತ್ತವೆ. ನೀವು ಹಾವನ್ನು ಪಡೆದರೆ ಮತ್ತು ಗ್ರಿಡ್ ಕೆಳಗೆ ಹೋದರೆ, ಅಂತಿಮ ಚೌಕವನ್ನು ತಲುಪುವ ನಿಮ್ಮ ಸಮಯ ಮತ್ತಷ್ಟು ಹೆಚ್ಚಾಗುತ್ತದೆ. ಪ್ಲೇಯರ್‌ಗಳು ತಮ್ಮ ಆಟವನ್ನು ಆಡಲು ವಿಭಿನ್ನ ಟೋಕನ್‌ಗಳನ್ನು (ಪೀಸ್‌ಗಳನ್ನು) ಪಡೆಯುತ್ತಾರೆ. ಪ್ಲೇಯರ್‌ಗಳು ಆಟವನ್ನು ಮುಂದುವರೆಸಲು ದಾಳವನ್ನು ಉರುಳಿಸುತ್ತಾರೆ. ಕೆಲವೊಮ್ಮೆ, ಆಟದ ಸಮಯವನ್ನು ಕಡಿಮೆ ಮಾಡಲು ಎರಡು ದಾಳಗಳನ್ನು ಸಹ ಆಟದಲ್ಲಿ ಬಳಸಲಾಗುತ್ತದೆ

ಗೇಮ್‌ಪ್ಲೇ 

  • ಸಾಮಾನ್ಯವಾದ ಹಾವು ಮತ್ತು ಏಣಿ ಬೋರ್ಡ್ ಗೇಮ್‌ನಲ್ಲಿ, ಪ್ಲೇಯರ್ ಆರಂಭಿಕ ಚೌಕದಿಂದ ಟೋಕನ್‌ನೊಂದಿಗೆ ಪ್ರಾರಂಭಿಸುತ್ತಾನೆ. ಗ್ರಿಡ್ ಸಾಮಾನ್ಯವಾಗಿ "1" ರೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಪ್ಲೇಯರ್‌ಗಳು ಒಂದೇ ದಾಳವನ್ನು ಉರುಳಿಸುವ ಮೂಲಕ ವಿವಿಧ ಚೌಕಗಳಿಗೆ ಜಂಪ್ ಮಾಡುತ್ತಾರೆ. ಮತ್ತು ದಾಳ ತೋರಿಸಿದ ಸಂಖ್ಯೆಗೆ ಅನುಗುಣವಾಗಿ ಟೋಕನ್ ಅನ್ನು ಚಲಿಸುತ್ತಾರೆ.
  • ಪ್ಲೇಯರ್‌ಗಳು ಕೆಳಗಿನಿಂದ ಮೇಲಕ್ಕೆ ಬೋರ್ಡ್‌ನಲ್ಲಿ ಗುರುತಿಸಲಾದ ನಿರ್ದಿಷ್ಟ ಮಾರ್ಗವನ್ನು ಅನುಸರಿಸಬೇಕು. ತಿರುವಿನಲ್ಲಿ ಆಡುವಾಗ, ಟೋಕನ್ ಏಣಿಯ ತುದಿಯಲ್ಲಿದ್ದರೆ, ಅದು ಏರುವ ಸಂಖ್ಯೆಯವರೆಗೆ ಹಾರುತ್ತದೆ. ಇದರರ್ಥ ಪ್ಲೇಯರ್ ಬಹಳಷ್ಟು ಸಂಖ್ಯೆಗಳನ್ನು ಒಮ್ಮೆಲೆ ಜಂಪ್ ಮಾಡುತ್ತಾನೆ. ಮತ್ತು ಆಟದಲ್ಲಿ ಮುಂದಕ್ಕೆ ಹೋಗುತ್ತಾನೆ.
  • ಪ್ಲೇಯರ್‌ಗಳು ಹಾವಿನ ಮುಖದ ಮೇಲೆ ಇಳಿದರೆ, ನಿಮ್ಮ ಟೋಕನ್ ಹಾವಿನ ಬಾಲವಿರುವ ಕೆಳಸಂಖ್ಯೆಯ ಚೌಕಕ್ಕೆ ಅನೇಕ ಹಂತಗಳನ್ನು ದಾಟಿ ಕೆಳಕ್ಕಿಳಿಯತ್ತದೆ.
  • ಒಂದುವೇಳೆ ದಾಳ 6 ಅನ್ನು ಉರುಳಿಸಿದರೆ, ಪ್ಲೇಯರ್ 6 ಚೌಕಗಳನ್ನು ಚಲಿಸುತ್ತಾನೆ ಮತ್ತು ಮತ್ತೊಮ್ಮೆ ದಾಳ ಉರುಳಿಸಲು ಹೆಚ್ಚುವರಿ ಅವಕಾಶ ಪಡೆಯುತ್ತಾನೆ. ಇಲ್ಲದಿದ್ದರೆ, ಆಟವು ಮುಂದಿನ ಪ್ಲೇಯರ್‌ಗೆ ಆಡಲು ಅವಕಾಶ ನೀಡುತ್ತವೆ. ತಮ್ಮ ಟೋಕನ್ ಅನ್ನು ಕೊನೆಯ ಚೌಕಕ್ಕೆ ತೆಗೆದುಕೊಂಡು ಹೋಗುವ ಮೊದಲ ಪ್ಲೇಯರ್  ವಿಜೇತನಾಗುತ್ತಾನೆ.

ಹಾವು ಮತ್ತು ಏಣಿ ಆಟದಲ್ಲಿ ನೆನಪಿಡಬೇಕಾದ ನಿಯಮಗಳು

  • ಹಾವಿನ ಮುಖವಿರುವ ಸಂಖ್ಯೆಯ ಮೇಲೆ ಟೋಕನ್ ಬಿದ್ದಾಗ ಆಟದಲ್ಲಿ ಹಿನ್ನಡೆಯಾಗುತ್ತದೆ. ನಂತರ ನಿಮ್ಮ ಟೋಕನ್ ಹಾಗೆಯೇ ಕೆಳಕ್ಕೆ ಚಲಿಸುತ್ತದೆ ಮತ್ತು ಹಾವಿನ ಬಾಲ ಎಲ್ಲಿ ಕೊನೆಗೊಳ್ಳುತ್ತದೆಯೋ ಆ ಸಂಖ್ಯೆಯ ಚೌಕದ ಮೇಲೆ ಬಂದು ನಿಲ್ಲುತ್ತದೆ.
  • ಟೋಕನ್ ಏಣಿ ಶುರುವಾಗುವ ಚೌಕದ ಮೇಲೆ ಬಿದ್ದಾಗ ನಿಮ್ಮ ಆಟಕ್ಕೆ ಮುನ್ನಡೆಯಾಗುತ್ತದೆ; ತಕ್ಷಣವೇ ಪ್ಲೇಯರ್ ಮೇಲಕ್ಕೆ ಚಲಿಸುತ್ತಾನೆ.
  • ಆದರೆ, ಪ್ಲೇಯರ್ ಹಾವಿನ ಕೆಳಭಾಗದಲ್ಲಿಯೋ ಅಥವಾ ಏಣಿಯ ಮೇಲ್ಭಾಗದಲ್ಲಿಯೋ ಇದ್ದರೆ ಆಗ ಆಟದಲ್ಲಿ ಏನೂ ಬದಲಾವಣೆ ಆಗುವುದಿಲ್ಲ. ಇದು ಪ್ಲೇಯರ್ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಪ್ಲೇಯರ್‌ಗಳು ದಾಳ ಉರುಳಿಸುವುದನ್ನು ಮುಂದುವರಿಸುತ್ತಾನೆ. ಪ್ಲೇಯರ್‌ಗಳು ಎಂದಿಗೂ ಏಣಿಯಿಂದ ಕೆಳಗೆ ಚಲಿಸಲು ಸಾಧ್ಯವಿಲ್ಲ ಎನ್ನುವುದನ್ನು ಆಟದ ನಿಯಮಗಳು ಸೂಚಿಸುತ್ತವೆ.
  • ಯಾರನ್ನೂ ನಾಕ್ಔಟ್ ಮಾಡದೆಯೇ ಎರಡು ಟೋಕನ್‌ಗಳು ಏಕಕಾಲದಲ್ಲಿ ಚಲಿಸಬಹುದು. ಮುಂದಿನ ಸರದಿಯಲ್ಲಿ ದಾಳ ಉರುಳಿಸುವವರೆಗೆ, ಪ್ಲೇಯರ್ ಅದೇ ಸಂಖ್ಯೆಯಲ್ಲಿ ಉಳಿಯಬಹುದು.
  • ನೀವು 100 ರ ಸಂಖ್ಯೆಯ ಚೌಕಕ್ಕೆ ಹತ್ತಿರವಾಗುತ್ತಿದ್ದಂತೆ, ಪ್ಲೇಯರ್ ಅಗತ್ಯವಿರುವ ನಿಖರ ಸಂಖ್ಯೆಯನ್ನು ಪಡೆಯಲು ದಾಳ ಉರುಳಿಸಬೇಕು. ನಿಮಗೆ ಬೇಕಾದ ಸಂಖ್ಯೆ ದಾಳದಿಂದ ಬರದಿದ್ದರೆ, ಮುಂದಿನ ಸರದಿಗಾಗಿ ಕಾಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಅದೃಷ್ಟ ಕೆಲಸಕ್ಕೆ ಬರುತ್ತದೆ. ಉದಾಹರಣೆಗೆ, ಆಟಗಾರನು 96 ಸಂಖ್ಯೆಯ ಚೌಕವನ್ನು ತಲುಪಿದರೆ ಮತ್ತು ದಾಳವು ಸಂಖ್ಯೆ 5 ಅನ್ನು ಉರುಳಿಸಿದರೆ, ದಾಳದಿಂದ 4 ಸಂಖ್ಯೆಯನ್ನು ಪಡೆಯುವವರೆಗೆ ನೀವು ನಿಮ್ಮ ಟೋಕನ್ ಅನ್ನು ಮುಂದೆ ಸರಿಸಲು ಸಾಧ್ಯವಿಲ್ಲ. ಒಬ್ಬ ಪ್ಲೇಯರ್ 99 ಸಂಖ್ಯೆಯ ಚೌಕವನ್ನು ತಲುಪಿದರೆ, ಆ ಪ್ಲೇಯರ್ ದಾಳದಿಂದ ಒಂದನ್ನು ಪಡೆಯುವವರೆಗೆ ಕಾಯಲೇಬೇಕು.

MPL ನಲ್ಲಿ ಹಾವು ಮತ್ತು ಏಣಿ ಬೋರ್ಡ್ ಗೇಮ್ ಅನ್ನು ಆಡುವುದು ಹೇಗೆ?

  • ಫಿಸಿಕಲ್ ಬೋರ್ಡ್‌ನಲ್ಲಿ ಆಟವನ್ನು ಆಡಲು, ನಿಮಗೆ ಎರಡರಿಂದ ನಾಲ್ಕು ಪ್ಲೇಯರ್‌ಗಳು, ಗೇಮ್ ಬೋರ್ಡ್, ಉರುಳಿಸಲು ಒಂದು ದಾಳ ಮತ್ತು ಪ್ರತಿ ಪ್ಲೇಯರ್‌ಗಳಿಗೆ ಒಂದೊಂದು ಟೋಕನ್‌ನ ಅಗತ್ಯವಿರುತ್ತದೆ. ಆಟವನ್ನು ಪ್ರಾರಂಭಿಸುವ ಮೊದಲು, ಪ್ರತಿಯೊಬ್ಬ ಆಟಗಾರನು ದಾಳವನ್ನು ಉರುಳಿಸಬೇಕು ಮತ್ತು ಹೆಚ್ಚಿನ ಸಂಖ್ಯೆಯ ದಾಳ ಉರುಳಿಸಿದ ಪ್ಲೇಯರ್ ಆಟವನ್ನು ಪ್ರಾರಂಭಿಸುತ್ತಾನೆ.
  • ಆನ್‌ಲೈನ್‌ನಲ್ಲಿ ಹಾವು ಮತ್ತು ಏಣಿ ಆಟ ಆಡಲು ನಿಮಗೆ MPL ಆ್ಯಪ್ ಮತ್ತು ಸ್ಥಿರವಾದ ಇಂಟರ್ನೆಟ್ ಕನೆಕ್ಷನ್‌ನ ಅಗತ್ಯವಿದೆ. ಪ್ರತಿ ಪ್ಲೇಯರ್ ಮೂರು ಟೋಕನ್‌ಗಳನ್ನು ಪಡೆಯುತ್ತಾನೆ ಮತ್ತು ಎದುರಾಳಿಯು ಆಟವನ್ನು ಗೆಲ್ಲುವ ಮೊದಲು ಎಲ್ಲಾ ಮೂರು ಟೋಕನ್‌ಗಳನ್ನು ಕೊನೆಯ ಚೌಕಕ್ಕೆ ತಂದು ನಿಲ್ಲಿಸಬೇಕು.
  • ಆಟದಲ್ಲಿ ಟೋಕನ್ ಒಂದುವೇಳೆ ಹಾವಿನ (ಹಾವಿನ ತಲೆ) ಮೇಲ್ಭಾಗದಲ್ಲಿ ಇಳಿದರೆ, ಅದು ತನ್ನ ಬಾಲ ಎಲ್ಲಿ ಕೊನೆಗೊಳ್ಳುತ್ತದೆಯೋ ಆ ಸಂಖ್ಯೆಯ ಚೌಕದ ಮೇಲೆ ಬಂದು ನಿಲ್ಲುತ್ತದೆ.
  • ಆಟದಲ್ಲಿ ಟೋಕನ್ ಒಂದುವೇಳೆ ಏಣಿ ಶುರುವಾಗುವ ಚೌಕದ ಮೇಲೆ ಬಿದ್ದಾಗ ಇಳಿದರೆ, ಪ್ಲೇಯರ್ ಏಣಿಯನ್ನು ಏರುತ್ತಾನೆ ಮತ್ತು ದಾಳ ಉರುಳಿಸಲು ಹೆಚ್ಚುವರಿ ಅವಕಾಶ ಪಡೆಯುತ್ತಾನೆ.
  • ಆಟದಲ್ಲಿ ಟೋಕನ್ ಏಣಿಯ ಮೇಲ್ಭಾಗದಲ್ಲಿ ಅಥವಾ ಹಾವಿನ ಬಾಲದ ತುದಿಯಿರುವ ಚೌಕದಲ್ಲಿ ಇಳಿದರೆ, ಟೋಕನ್ ಅದೇ ಸ್ಥಳದಲ್ಲಿ ಅಥವಾ ಅದೇ ಸಂಖ್ಯೆಯಲ್ಲಿ ಉಳಿಯುತ್ತದೆ. ಪ್ಲೇಯರ್‌ಗಳು ಎಂದಿಗೂ ಏಣಿಯಿಂದ ಕೆಳಗೆ ಚಲಿಸಲು ಅಥವಾ ಹಾವಿನ ತುದಿಯಿಂದ ಮೇಲೆ ಚಲಿಸಲು ಸಾಧ್ಯವಿಲ್ಲ. ಪ್ಲೇಯರ್‌ ಟರ್ನ್ ಕಳೆದುಕೊಳ್ಳಲು ಮತ್ತು ಮುಂದಿನ ಸುತ್ತಿಗಾಗಿ ಕಾಯಲು ಸಹ ಆಯ್ಕೆ ಮಾಡಬಹುದು.
  • ಸಾಂಪ್ರದಾಯಿಕ ನಿಯಮಗಳ ಪ್ರಕಾರ, ಆಟದ ಟೋಕನ್ ಎದುರಾಳಿಯ ಟೋಕನ್‌ನಂತೆಯೇ, ಅದೇ ಸಂಖ್ಯೆಯ ಚೌಕದಲ್ಲಿ ಬಂದರೆ, ಯಾರೂ ನಾಕ್ಔಟ್ ಆಗುವುದಿಲ್ಲ ಮತ್ತು ಎರಡೂ ಟೋಕನ್‌ಗಳು ಹಾಗೆಯೇ ಉಳಿಯುತ್ತವೆ. ಆದಾಗ್ಯೂ, ಆನ್‌ಲೈನ್ ಹಾವು ಮತ್ತು ಏಣಿ ಆಟದಲ್ಲಿ, ನಿಮ್ಮ ಆಟದ ಟೋಕನ್ ಎದುರಾಳಿಯ ಟೋಕನ್‌ನಂತೆಯೇ ಅದೇ ಚೌಕದಲ್ಲಿ ಇಳಿದರೆ, ಎದುರಾಳಿಯ ಆಟದ ಟೋಕನ್ ನಾಕ್ಔಟ್ ಆಗುತ್ತದೆ ಮತ್ತು ಎದುರಾಳಿಯು ಪುನಃ ಆಟವನ್ನು ಪ್ರಾರಂಭಿಸಬೇಕಾಗುತ್ತದೆ.
  • ಆಟವನ್ನು ಗೆಲ್ಲಲು, ಪ್ಲೇಯರ್‌ಗಳು 100 ರ ಸಂಖ್ಯೆಯ ಚೌಕವನ್ನು ತಲುಪಬೇಕು. ಅದಕ್ಕಾಗಿ ನಿಖರವಾದ ಸಂಖ್ಯೆಯ ದಾಳವನ್ನು ಉರುಳಿಸಬೇಕಾಗುತ್ತದೆ. ಪ್ಲೇಯರ್‌ಗಳು ನಿಖರವಾದ ಸಂಖ್ಯೆಯನ್ನು ಉರುಳಿಸಲು ವಿಫಲವಾದರೆ ಮುಂದಿನ ಅವಕಾಶದಲ್ಲಿ ದಾಳ ಉರುಳಿಸಬೇಕು.

ಹಾವು ಮತ್ತು ಏಣಿ ಆಟದಲ್ಲಿ ಗೆಲುವು

ಪ್ಲೇಯರ್ ತನ್ನ ಎಲ್ಲಾ ಟೋಕನ್‌ಗಳನ್ನು ಬೋರ್ಡ್‌ನ ಕೊನೆಯ ಚೌಕದಲ್ಲಿ (ಸಂಖ್ಯೆ 100) ಯಾವುದೇ ಎದುರಾಳಿಗಿಂತ ಮೊದಲು ತಲುಪಿದಾಗ, ಹಾವು ಮತ್ತು ಏಣಿ ಆಟ ಕೊನೆಗೊಳ್ಳುತ್ತದೆ. ಪ್ರತಿ ಪ್ಲೇಯರ್‌ಗಳು ನೀಡಿದ ಚಲನೆಗಳ ಸಂಖ್ಯೆಯನ್ನು ಖಾಲಿ ಮಾಡಿದಾಗಲೂ ಆಟ ಕೊನೆಗೊಳ್ಳಬಹುದು. ಈ ಸಂದರ್ಭದಲ್ಲಿ ಆಟ ಮುಗಿದ ನಂತರ, ಹೆಚ್ಚಿನ ಸ್ಕೋರ್ ಹೊಂದಿರುವ ಪ್ಲೇಯರ್ ವಿಜೇತನಾಗುತ್ತಾನೆ.

ವ್ಯತ್ಯಾಸಗಳು  

ಹಾವು ಮತ್ತು ಏಣಿ ಆಟದ ಒಂದು ವ್ಯತ್ಯಾಸವೆಂದರೆ ಪ್ಲೇಯರ್, ಆಟದಲ್ಲಿ ಚೌಕವನ್ನು ತಲುಪಲು ನಿಖರವಾದ ಸಂಖ್ಯೆಯನ್ನುಉರುಳಿಸಬೇಕು. ದಾಳದಲ್ಲಿ ಬಂದ ಸಂಖ್ಯೆ ದೊಡ್ಡದಾಗಿದ್ದರೆ, ಟೋಕನ್ ಸ್ಥಳದಲ್ಲಿಯೇ ಇರುತ್ತದೆ ಅಥವಾ ಕೊನೆಯ ಚೌಕದಿಂದ ದೂರ ಹೋಗಿ ಮತ್ತೆ ಹಿಂತಿರುಗಿ ಬರುತ್ತದೆ. ಉದಾಹರಣೆಗೆ, ಪ್ಲೇಯರ್‌ಗೆ 3 ಅಗತ್ಯವಿದ್ದರೂ ದಾಳ ಉರುಳಿದಾಗ 5 ಬಿದ್ದರೆ, ಆಗ  ಟೋಕನ್ ಅನ್ನು 3 ಹೆಜ್ಜೆ ಮುಂದಕ್ಕೆ ಮತ್ತು ಎರಡು ಹೆಜ್ಜೆ ಹಿಂದಕ್ಕೆ ಇಡಲಾಗುತ್ತದೆ. ಮತ್ತೊಂದು ಉದಾಹರಣೆಯೆಂದರೆ, ಪ್ಲೇಯರ್ ಗೆಲ್ಲಲು 1 ಅಗತ್ಯವಿರುವಾಗ ದಾಳದಿಂದ 5 ಅನ್ನು ಉರುಳಿಸಿದರೆ, ಅವನು ಮತ್ತೆ ನಾಲ್ಕು ಹೆಜ್ಜೆ ಹಿಂದಕ್ಕೆ ಸರಿಯುತ್ತಾನೆ.

ಈ ಆಟದ ಮತ್ತೊಂದು ವರ್ಷನ್ ಎಂದರೆ ಆ್ಯಡ್ಡರ್ಸ್ ಮತ್ತು ಲ್ಯಾಡರ್ಸ್ ಆಗಿದೆ. ಇದು ಯಾವುದೇ ದಾಳಗಳನ್ನು ಹೊಂದಿಲ್ಲ ಮತ್ತು ಕನಿಷ್ಠ ಐದು ಅದೇ ಟೋಕನ್‌ಗಳನ್ನು ಹೊಂದಿದೆ. ಎಲ್ಲಾ ಪ್ಲೇಯರ್‌ಗಳು ಆ ಟೋಕನ್‌ಗಳನ್ನು ಹಂಚಿಕೊಳ್ಳುತ್ತಾರೆ. ಈ ಆಟವನ್ನು ಫೈವ್-ಬೈ-ಫೈವ್ ಬೋರ್ಡ್‌ನಲ್ಲಿ ಐದು ಟೋಕನ್‌ಗಳೊಂದಿಗೆ ಆಡಬಹುದು. ಇದರಲ್ಲಿ ದಾಳವಿಲ್ಲ; ಬದಲಿಗೆ, ಪ್ಲೇಯರ್‌ ಒಂದು ನಿರ್ದಿಷ್ಟ ಟೋಕನ್ ಅನ್ನು ಆರಿಸಿಕೊಳ್ಳುತ್ತಾನೆ ಮತ್ತದನ್ನು ಒಂದರಿಂದ ನಾಲ್ಕು ಸ್ಥಳಗಳ ನಡುವೆ ಸರಿಸುತ್ತಾನೆ. ಕೊನೆಯ ಟೋಕನ್ ಅನ್ನು ಕೊನೆಯ ಸಂಖ್ಯೆಗೆ ತಲುಪಿಸುವ ಯಾವ ಪ್ಲೇಯರ್ ಮೊದಲ ತಲುಪಿಸುತಾನೋ, ಅವನು ಗೆಲ್ಲುತ್ತಾನೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ವ್ಯಾಪಕವಾಗಿ ಆಡಲಾಗುವ ಅತ್ಯಂತ ಜನಪ್ರಿಯ ವರ್ಷನ್ ಎಂದರೆ 1943 ರಲ್ಲಿ ಮಿಲ್ಟನ್ ಬ್ರಾಡ್ಲಿಯವರ ಚ್ಯೂಟ್ಸ್ ಮತ್ತು ಲ್ಯಾಡರ್ಸ್. ಇಲ್ಲಿನ ಹಾವಿನ ಬದಲಿಗೆ ಆಟದ ಮೈದಾನವು ಅದರ ಸ್ಥಾನವನ್ನು ಪಡೆದುಕೊಂಡಿತು. ಆಟವು 10x10 ಬೋರ್ಡ್‌ನಲ್ಲಿದೆ, ಮತ್ತು ಪ್ಲೇಯರ್‌ಗಳು ದಾಳದ ಬದಲಾಗಿ ಸ್ಪಿನ್ನರ್ ಪ್ರಕಾರ ತಮ್ಮ ಟೋಕನ್‌ಗಳನ್ನು ಮುನ್ನಡೆಸುತ್ತಾರೆ. ಆಟದ ಮೈದಾನದಲ್ಲಿ  ಮಕ್ಕಳು ಏಣಿಗಳನ್ನು ಹತ್ತುವುದು ಮತ್ತು ಇಳಿಯುವುದನ್ನು ಕಾಣುವ ವಿಷಯವನ್ನೇ ಬೋರ್ಡ್ ಗೇಮ್ ಕೂಡ ಹೊಂದಿದೆ.

FAQ ಗಳು

ಹಾವು ಮತ್ತು ಏಣಿ ಆಟದ ಉದ್ದೇಶವೇನು?

ಹಾವು ಮತ್ತು ಏಣಿ ಆಟ ಎಷ್ಟು ಸಮಯದ ಆಟವಾಗಿದೆ?

ಹಾವು ಮತ್ತು ಏಣಿ ಆಟವು ಮಕ್ಕಳಿಗೆ ಏನು ಕಲಿಸಿ ಕೊಡುತ್ತದೆ?

ಹಾವು ಮತ್ತು ಏಣಿ ಆಟದಲ್ಲಿ ನೀವು ಎಷ್ಟು ದಾಳಗಳನ್ನು ಉರುಳಿಸುತ್ತೀರಿ?

Disclaimer

This game may be habit-forming or financially risky. Play Responsibly.

Galactus Funware is the owner of, and reserves all rights to the assets, content, services, information, and products and graphics in the website except any third party content.

Galactus Funware refuses to acknowledge or represent about the accuracy or completeness or reliability or adequacy of the website's third party content. These content, materials, information, services, and products in this website, including text, graphics, and links, are provided "AS IS" and without warranties of any kind, whether expressed or implied.

*MPL is the biggest gaming app in India based on the number of unity games, special tournaments and formats. MPL is available only to people above 18 years of age. MPL is available in all states where permissible by extant law. Consequently, users located in some states may not be able to access our App or its contests. For an updated list of such states, please download the App